Saturday, July 10, 2010

SMS ಮೂಲಕ ಉಚಿತವಾಗಿ ನಿಮ್ಮ ಮೇಲ್ ಪಡೆಯಿರಿ

ನೀವು ಹಾಟ್‌ಮೇಲ್ ಅಥವಾ ಲೈವ್‌‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ನೋಡಬಹುದು ಹಾಗೂ ಅದಕ್ಕಾಗಿ ನೀವು ಯಾವುದೇ ಶುಲ್ಕವನ್ನೂ ನೀಡುವುದು ಬೇಕಾಗಿಲ್ಲ.
ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನೀವು ಇಲ್ಲಿ ನೀಡಿರುವ ಜಾಲತಾಣಕ್ಕೆ ಹೋಗಬೇಕು.

       ಅಲ್ಲಿ ನಿಮ್ಮ user name ಹಾಗೂ password ಕೊಟ್ಟು Sign in ಆಗಿ





ನಂತರ ಅಲ್ಲಿ ಕೊಟ್ಟಿರುವ ಜಾಗದಲ್ಲಿ ನಿಮ್ಮ ಮೊಬೈಲ್‌ ನಂಬರ್‍ ಟೈಪಿಸಿ. ಉದಾ: 9400024365
ನಂಬರ್‍ ಕೊಟ್ಟ ನಂತರ Next ಬಟನ್ ಒತ್ತಿರಿ.



ಈಗ ನಿಮ್ಮ ಮೊಬೈಲ್‌ಗೆ ಒಂದು ಸಂದೇಶ ಬರುತ್ತದೆ. ಅವರು ಕಳುಹಿಸಿರುವ ಸಂದೇಶದಲ್ಲಿ ಒಂದು verification code ಇರುತ್ತದೆ.(ಉದಾ:4873). ಅದನ್ನು ಮೇಲಿನ ಬಾಕ್ಸ್‌ನಲ್ಲಿ ಟೈಪಿಸಿ Next ಬಟನ್ ಕ್ಲಿಕ್ಕಿಸಿ.







ನಂತರ ಬರುವ ವಿಂಡೋನಲ್ಲಿ ಹಾಟ್‌ಮೇಲ್ ಎಂಬುದನ್ನು ಸೆಲೆಕ್ಟ್ ಮಾಡಿ, ಆಗ ಬರುವ Pricing and terms of use ಬಾಕ್ಸ್‌‌ನಲ್ಲಿ I agree ಬಟನ್ ಒತ್ತಿರಿ.






ನಂತರ Save ಬಟನ್ ಒತ್ತಿರಿ. ಈಗ ನಿಮ್ಮ inboxಗೆ ಬರುವ ಮೇಲ್‌ಗಳು ನಿಮ್ಮ ಮೊಬೈಲ್‌ಗೂ ಬರುತ್ತದೆ. ಆದರೆ ಪೂರ್ತಿ ಮೇಲ್‌ SMS ಮೂಲಕ ಬರುವುದಿಲ್ಲ. ಮೇಲ್‌ನ ವಿಷಯ ಹಾಗೂ matterನ ಒಂದೆರಡು ಲೈನ್‌ಗಳು ಮಾತ್ರ ಉಚಿತವಾಗಿ ಬರುತ್ತದೆ. ನೀವು ಆ ಮೇಲ್‌ನ್ನು ಇನ್ನೂ ನೋಡಬೇಕೆಂದರೆ ಆ ನಂಬರ್‌ಗೆ M ಎಂದು ರಿಪ್ಲೇ ಮಾಡಬೇಕು. ಆದರೆ ನೆನಪಿಡಿ ಹೀಗೆ ನೀವು ರಿಪ್ಲೇ ಮಾಡಿದಾಗ ಅವರು ಮತ್ತೊಂದು SMS ಕಳುಹಿಸುವುದಕ್ಕೆ ಸುಮಾರಾಗಿ 1.50 ರೂ. ದರ ವಿಧಿಸುತ್ತಾರೆ. ನೀವು ಇದನ್ನು ಯಾವುದಾದರೂ ತುರ್ತು ಸಂದೇಶಗಳನ್ನು ನೋಡಲು ಬಳಸಬಹುದು.

3 Comments:

Harish said...

Hey prasanna, just saw ur updated template along with the message stating the page is optimized for ff: will it possible to remove the same n' use a bit more standards compliant code browser options are some thing I personally believe have to be left to user choices, believe me there are people who still luv IE6. Not that i recommend IE, as a matter of fact mine's Opera (the latest snapshot build!) and a bit of chromium for certain quirky sites.

It is often noted that forcing one to use a particular browser usually ends up in the users aversion unless the site is his/her banking one ofcourse.

Hopefully you consider this small piece of constructive advice :)

btw, keep up the good work :) hopefully i might be able to put in a few articles for the tech-kannada blog but currently my exams are in full swing, so shall let you know after their completion.

ಕಂಪ್ಯು ಇನ ಕನ್ನಡ ಲೇಖನಗಳು said...

ಚರ ದೂರವಾಣಿಯನ್ನು ಬರೆಯುವಲ್ಲಿ, ದೇಶಗಳ ಪಟ್ಟಿಯಲ್ಲಿ "ಭಾರತ"ದ ಹೆಸರು ಇಲ್ಲ. +೯೧ ಬರೆದರೂ hotmail ಅದನ್ನು ಸ್ವೀಕರಿಸುತ್ತಿಲ್ಲ. ಬಹುಶಃ ಈಗ ಈ ಸೌಲಭ್ಯವನ್ನು ಭಾರತ ದೇಶಕ್ಕೆ ನೀಡುತ್ತಿಲ್ಲ. ಈಮೇಲ್ ಅನ್ನು SMS ಮೂಲಕ ಪಡೆಯುವ ಬೇರೆ ಮಾರ್ಗಗಳಿದ್ದಲ್ಲಿ ದಯವಿಟ್ಟು ತಿಳಿಸಿ.

Prasanna S P said...

@ಕಂಪ್ಯು ಇನ ಕನ್ನಡ ಲೇಖನಗಳು, +91 ಸೇರಿಸಬೇಡಿ, ನಿಮ್ಮ ಹತ್ತು ಅಂಕೆಯ ಮೊಬೈಲ್ ನಂಬರ್‍ ಮಾತ್ರ ಕೊಡಿ.(ಉದಾ: 9400024365) ನಂತರ ನಿಮ್ಮ ಮೊಬೈಲಿಗೆ ಸಂಕೇತ ಬರುತ್ತದೆ. ನಿಮ್ಮ ಕಂಪ್ಯುಟರ್‌ನ ಮುಂದಿನ ವಿಂಡೋನಲ್ಲಿ ನಿಮ್ಮ ನಂಬರ್‍, ದೇಶ, ಹಾಗೂ ನಿಮ್ಮ service provider ಹೆಸರು (ಉದಾ: BSNL) ತಾನಾಗಿಯೇ ಬರುತ್ತದೆ. ನಂತರ ಅಲ್ಲಿ ನಿಮ್ಮ ಮೊಬೈಲಿಗೆ ಬಂದ ಗುಪ್ತ ಸಂಕೇತ ಕೊಟ್ಟರೆ ಆಯಿತು. ಮುಂದಿನ ವಿಧಾನಗಳನ್ನು ಮೇಲಿನಂತೆಯೇ ಅನುಸರಿಸಿದರಾಯಿತು.

ಅದನ್ನು ಹೊರತುಪಡಿಸಿ http://way2sms.comನಲ್ಲಿ ನಿಮ್ಮ ಮೇಲ್‌ಗಳನ್ನು SMS ಮೂಲಕ ಪಡೆಯಬಹುದು. ಆದರೆ ಅಲ್ಲಿ ಮೇಲ್ ಪೂರ್ತಿ ಬರುವುದಿಲ್ಲ, subject ಮಾತ್ರ ಬರುತ್ತದೆ. (It is just a mail alert service.)

Post a Comment