Wednesday, July 21, 2010

ಇಮೇಲ್ ಮೂಲಕ ಬ್ಲಾಗರ್‌ಗೆ ಪೋಸ್ಟ್ ಮಾಡುವುದು

ನೀವು ನಿಮಗೆ ಇಮೇಲ್‌ಗಳ ಮೂಲಕ ಬರುವ ಪ್ರಮುಖ ಮಾಹಿತಿಗಳನ್ನು ನಿಮ್ಮ ಬ್ಲಾಗ್‌ಗೆ ಹಾಕಬೇಕಿದ್ದರೆ ಅಥವಾ ಒಂದೇ ಲೇಖನವನ್ನು ಅನೇಕ ಬ್ಲಾಗ್‌ಗಳಿಗೆ ಪೋಸ್ಟ್‌ ಮಾಡಬೇಕಿದ್ದರೆ ಬ್ಲಾಗರ್‍ನಲ್ಲಿರುವ ಒಂದು ಸೌಲಭ್ಯ ನಿಮಗೆ ಉಪಯೋಗಕ್ಕೆ ಬರುತ್ತದೆ. ಮೊದಲು ಬ್ಲಾಗರ್‌ನಿಂದ ನಿಮ್ಮ ಅಕೌಂಟಿಗೆ ಲಾಗಿನ್ ಆಗಿ.

ನಿಮ್ಮ Dashboardನಲ್ಲಿ ಕಾಣುವ Settings ಲಿಂಕ್ ಒತ್ತಿರಿ.




ನಂತರ ಸೆಟ್ಟಿಂಗ್ಸ್‌ನಲ್ಲಿ Email & Mobile ಟ್ಯಾಬ್ ಒತ್ತಿರಿ.


ಅಲ್ಲಿ Posting Options ಕೆಳಗೆ Email Posting Address(Also known as Mail2Blogger) ಎಂದಿರುತ್ತದೆ.


ಅಲ್ಲಿ ಮೊದಲ ಅರ್ಧಭಾಗ ನಿಮ್ಮ ಗೂಗಲ್ ಐಡಿ ಇರುತ್ತದೆ. ಉತ್ತರಾರ್ಧದಲ್ಲಿ ಅಂದರೆ ಡಾಟ್ ಆದ ನಂತರ ಇರುವ ಬಾಕ್ಸ್‌‌ನಲ್ಲಿ ಒಂದು ಗುಪ್ತವಾದ ಪದ ನೀಡಿರಿ. ಆದರೆ ಆ ಪದ ಬೇರೆಯವರಿಗೆ ಗೊತ್ತಾಗದಂತೆ ಎಚ್ಚರವಹಿಸಿ. ನಂತರ ಅಲ್ಲಿ ಮೂರು ಆಯ್ಕೆಗಳಿರುತ್ತವೆ.
ಮೊದಲನೆಯದು "ಇಮೇಲ್‌ಗಳನ್ನು ತಕ್ಷಣವೇ ಪೋಸ್ಟ್ ಮಾಡಿ"
ಎರಡನೆಯದು "ಇಮೇಲ್‌ಗಳನ್ನು ಡ್ರಾಫ್ಟ್ ರೀತಿ ಸೇವ್ ಮಾಡಿ"
ಮೂರನೆಯದು "ಈ ಸೌಲಭ್ಯ ಬೇಡ"

ನಿಮ್ಮ ಮೇಲ್‌ಗಳು ತಕ್ಷಣವೇ ನಿಮ್ಮ ಬ್ಲಾಗ್‌ನಲ್ಲಿ ಬರಬೇಕೆಂದರೆ ಮೊದಲನೆಯದನ್ನು ಆರಿಸಿ. ನಂತರ Save Settings ಒತ್ತಿರಿ. ಅಲ್ಲಿಗೆ ನಿಮಗೊಂದು mail2blogger ಐಡಿ ಸಿದ್ಧವಾಗುತ್ತದೆ. ಉದಾ:yourgoogleID.secretword@blogger.com.



ನಂತರ ಈ ಮೇಲ್ ಐಡಿಗೆ ನಿಮ್ಮ ಮೇಲ್ ಕಳುಹಿಸಿದರೆ ಅದು ನಿಮ್ಮ ಬ್ಲಾಗ್‌ನಲ್ಲಿ ಪೋಸ್ಟಾಗುತ್ತದೆ. ಇದೇ ರೀತಿ ನಿಮ್ಮೆಲ್ಲಾ ಬ್ಲಾಗ್‌ಗಳಿಗೂ ಒಂದೊಂದು ಐಡಿ ಪಡೆದುಕೊಂಡರೆ ಎಲ್ಲಾ ಬ್ಲಾಗ್‌ಗಳಿಗೂ ಒಮ್ಮೆಲೇ ಲೇಖನಗಳನ್ನು ಪೋಸ್ಟ್ ಮಾಡಬಹುದು. ಆದರೆ ಈ ಇಮೇಲ್ ಐಡಿ ಯಾರಿಗೂ ದೊರಕದಂತೆ ನೋಡಿಕೊಳ್ಳಿ. ಏಕೆಂದರೆ ನಿಮ್ಮ ಈ ಐಡಿ ಗೊತ್ತಾದರೆ ಯಾರುಬೇಕಾದರೂ ನಿಮ್ಮ ಬ್ಲಾಗ್‌ನಲ್ಲಿ ಏನು ಬೇಕಾದರೂ ಬರೆಯಬಹುದು. ಆದ್ದರಿಂದ ಈ ಸೌಲಭ್ಯ ಬಳಸುವಾಗ ಸಾಕಷ್ಟು ಎಚ್ಚರಿಕೆಯಿಂದಿರುವುದು ಅವಶ್ಯ.

ಇನ್ನು ಮೇಲ್‌ ಕಳುಹಿಸುವಾಗ ಒಂದು ಸೂಚನೆ.  ನೀವು ನಿಮ್ಮ ಲೇಖನಗಳನ್ನು ಇಮೇಲ್‌ ಮೂಲಕ ಬ್ಲಾಗರ್‌ ಜೊತೆ ಬೇರೆಯವರಿಗೂ  ಹಳುಹಿಸುತ್ತಿದ್ದಲ್ಲಿ  ನಿಮ್ಮ ಬ್ಲಾಗರ್‍ ಐಡಿಯನ್ನು To address ಎಂಬಲ್ಲಿ ಬರೆಯದೇ BCC ಎಂಬಲ್ಲಿ ಬರೆಯಿರಿ. ಏಕೆಂದರೆ To address ಜಾಗದಲ್ಲಿ ಬರೆದರೆ ನಿಮ್ಮ ಐಡಿ ಬೇರೆಯವರಿಗೂ ದೊರೆಯಬಹುದು. ಒಂದುವೇಳೆ ಬೇರೆಯವರಿಗೆ ನಿಮ್ಮ ಬ್ಲಾಗರ್‍ ಐಡಿ ಗೊತ್ತಾಗಿದೆ ಎಂಬ ಅನುಮಾನ ಬಂದರೆ ಕೂಡಲೇ ಬ್ಲಾಗರ್‌ನ ಸೆಟ್ಟಿಂಗ್ಸ್‌‌ನಲ್ಲಿ ನಿಮ್ಮ ಸೀಕ್ರೆಟ್ ವರ್ಡ್ ಬದಲಾಯಿಸಿ.

-ಪ್ರಸನ್ನ.ಎಸ್.ಪಿ

0 Comments:

Post a Comment