Sunday, July 18, 2010

ಟೆಕ್ನಿಕಲಿ ಪರ್ಫೆಕ್ಟ್, ಆದರೆ.....


ಮೇಲಿನ ಉತ್ತರ ನೋಡಿ. ಎಷ್ಟು ಸುಲಭವಾಗಿ xನ್ನು ಕಂಡು ಹಿಡಿದಿದ್ದಾನೆ. ಯಾವನೋ ಅತೀ ಬುದ್ಧಿವಂತನೇ ಬರ್ದಿರ್ಬೇಕು! 
ಇದನ್ನು ನೋಡಿ ನನಗೊಂದು ಜೋಕ್ ನೆನಪಾಯಿತು....


ಒಂದು ನಗರದ ಮೇಲೆ ಹೆಲಿಕ್ಯಾಪ್ಟರ್‌ನಲ್ಲಿ ಪೈಲಟ್ ಹಾಗೂ ಸಹಪೈಲಟ್ ಹಾರಾಟ ನಡೆಸುತ್ತಿರುತ್ತಾರೆ. ಅವರಿಗೆ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಕಡಿದು ಹೋದ ಕಾರಣ ತಾವೆಲ್ಲಿದ್ದೇವೆ ಎಂದು ತಿಳಿಯದೇ ಪೈಲಟ್ ಒಂದು ಕಟ್ಟಡದ ಸುತ್ತ ಒಂದು ಸುತ್ತು ಹಾಕಿ ಒಂದು ಹಾಳೆಯ ಮೇಲೆ "ನಾನೀಗ ಎಲ್ಲಿದ್ದೇನೆ?" ಎಂದು ದೊಡ್ಡದಾಗಿ ಬರೆದು ಆ ಕಟ್ಟಡದ ಎದುರಿಗೆ ಪ್ರದರ್ಶಿಸಿದ. ಅದನ್ನು ಓದಿ ಆ ಕಟ್ಟಡದಲ್ಲಿದ್ದ ಜನ ಒಂದು ಹಾಳೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಹೀಗೆ ಬರೆದು ಪೈಲಟ್‌ನ ಕಡೆ ಪ್ರದರ್ಶಿಸಿದರು, "ನೀವೀಗ ಒಂದು ಹೆಲಿಕ್ಯಾಪ್ಟರ್‌‌ನಲ್ಲಿದ್ದೀರ". ಆ ಉತ್ತರವನ್ನು ನೋಡಿ ನಸುನಕ್ಕ ಆ ಪೈಲಟ್ ಮ್ಯಾಪ್ ತೆಗೆದ. ನಂತರ ಆ ಮ್ಯಾಪ್‌‌ನಲ್ಲಿ ವಿಮಾನ ನಿಲ್ದಾಣವನ್ನು ಗುರುತಿಸಿ ಹೆಲಿಕ್ಯಾಪ್ಟರ್‌‌ನ್ನು ಸೀದಾ ನಿಲ್ದಾಣದಲ್ಲಿ ಇಳಿಸಿದ. ಆಗ ಸಹಪೈಲಟ್ ಕೇಳಿದ, "ನೀವೀಗ ಒಂದು ಹೆಲಿಕ್ಯಾಪ್ಟರ್‌‌ನಲ್ಲಿದ್ದೀರ" ಎಂಬ ಉತ್ತರ ನಿಮಗೆ ನಿಲ್ದಾಣ ಹುಡುಕಲು ಹೇಗೆ ಸಹಾಯ ಮಾಡಿತು? ಆಗ ಪೈಲಟ್, ಆ ಉತ್ತರದಿಂದ ನಾನೀಗ ಮೈಕ್ರೋಸಾಫ್ಟ್‌ನ ಕಟ್ಟಡದ ಪಕ್ಕ ಇದ್ದೇನೆ ಎಂದು ತಿಳಿಯಿತು, ನಂತರ ಮ್ಯಾಪ್‌ನಲ್ಲಿ ನಿಲ್ದಾಣದ ಮಾರ್ಗ ಹುಡುಕಿ ಹೆಲಿಕ್ಯಾಪ್ಟರ್‌‌‌ ಇಳಿಸಿದೆ ಎಂದನು. ನಿಮಗೆ ಅದು ಮೈಕ್ರೋಸಾಫ್ಟ್‌ನ ಕಟ್ಟಡವೆಂದು ಹೇಗೆ ತಿಳಿಯಿತು ಎಂದು ಸಹಪೈಲಟ್‌ ಕೇಳಿದನು. ಅದಕ್ಕೆ ಪೈಲಟ್ "ಅವರು ನೀಡಿದ ಉತ್ತರ ಮೈಕ್ರೋಸಾಫ್ಟ್‌ನ ಹೆಲ್ಪ್ ಲೈನ್‌ನ ಉತ್ತರದಂತೆ ಟೆಕ್ನಿಕಲಿ ಪರ್ಫೆಕ್ಟ್, ಆದರೆ ಸಂಪೂರ್ಣವಾಗಿ ಅನುಪಯುಕ್ತವಾಗಿತ್ತು. ಅದರಿಂದಲೇ ತಿಳಿಯಿತು ನಾನಾಗ ಎಲ್ಲಿದ್ದೆ ಎಂದು"... :-)

0 Comments:

Post a Comment