Monday, November 8, 2010

ನುಡಿಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವ ವಿಧಾನ

ನುಡಿ(ANSI)ಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವುದು ಹೇಗೆಂದು ತುಂಬಾ ಜನರಿಗೆ ಗೊಂದಲಗಳಿವೆ. ಆದರೆ ಬರಹ ತಂತ್ರಾಂಶದ ಜೊತೆ ಬರುವ Baraha Convert ಸಲಕರಣೆಯ ಸಹಾಯದಿಂದ ನುಡಿಯಲ್ಲಿ ಬರೆದಿರುವುದನ್ನು ಸುಲಭವಾಗಿ ಯೂನಿಕೋಡ್‌ಗೆ ಪರಿವರ್ತಿಸಬಹುದು. ಅದಕ್ಕಾಗಿ ಮೊದಲು ಬರಹ ತಂತ್ರಾಂಶವನ್ನು ಇಲ್ಲಿಂದ (http://baraha.com) ಡೌನ್ಲೋಡ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿ (install). (Baraha 7.0 ಆದರೆ ಸುಲಭ)

(ಇಲ್ಲಿರುವ ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಮೊದಲು ನೀವು ನುಡಿಯಲ್ಲಿ ಬರೆದಿರುವುದನ್ನು ಕಾಪಿ ಮಾಡಿಕೊಳ್ಳಿ.ನಂತರ Baraha Convert ಸಲಕರಣೆಯನ್ನು ಚಾಲನೆ ಮಾಡಿ. Start--> All programs--> Baraha--> Baraha convert. (ಬರಹ10.0 ಆದರೆ Start--> All programs--> Baraha Software--> Baraha 10--> Tools--> BarahaConvert)  ಬರಹ ಕನ್ವರ್ಟ್ ಸಲಕರಣೆಯ ಬಲಭಾಗದಲ್ಲಿ ANSI: ಎಂಬ ಕೆಳಗೆ ಬಿಳಿ ಬಣ್ಣದ ಬಾಕ್ಸ್ ಇರುತ್ತದೆ. ಅಲ್ಲಿ ನೀವು ನುಡಿ(ANSI)ಯಲ್ಲಿ ಬರೆದಿರುವುದನ್ನು ಪೇಸ್ಟ್ ಮಾಡಿ, ಮತ್ತು ಅದರ ಪಕ್ಕ BRHCODE ಕಡೆಗೆ ಮುಖಮಾಡಿರುವ ಬಾಣದ ಗುರುತನ್ನು ಒತ್ತಿ.
 


ಮುಂದೆ BRHCODEನಲ್ಲಿ ಒಂದಿಷ್ಟು ಅಕ್ಷರಗಳು ಬರುತ್ತದೆ. ಆಗ BRHCODEನಿಂದ UNICODE ಕಡೆಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ.


ಅಲ್ಲಿಗೆ ನೀವು ನುಡಿಯಲ್ಲಿ ಬರೆದಿರುವುದು ಯೂನಿಕೋಡ್‌ಗೆ ಪರಿವರ್ತನೆಯಾಗಿರುತ್ತದೆ. ಅದನ್ನು ನೋಡಲು UNICODE ಪಕ್ಕದಲ್ಲಿರುವ View ಬಟನ್ ಒತ್ತಿ.


ಈಗ ಯೂನಿಕೋಡ್‌ಗೆ ಪರಿವರ್ತನೆಯಾಗಿರುವ ಪಠ್ಯವು ನೋಟ್‌ಪ್ಯಾಡ್‌ನಲ್ಲಿ ಓಪನ್ ಆಗುತ್ತದೆ. ಅದನ್ನು ನೀವು ಸೇವ್ ಮಾಡಿಕೊಳ್ಳಬಹುದು.


ಈ ವಿಷಯವಾಗಿ ಏನಾದರೂ ಸಂದೇಹಗಳಿದ್ದರೆ ಪ್ರಶ್ನೆಗಳನ್ನು ಕೇಳಿ, ಪರಿಹರಿಸುವ ಪ್ರಯತ್ನ ಮಾಡುವೆ.

ಧನ್ಯವಾದಗಳೊಂದಿಗೆ,
ಪ್ರಸನ್ನ.ಎಸ್.ಪಿ13 Comments:

kavinagaraj said...

ಪ್ರಿಯ ಪ್ರಸನ್ನ, ನಿಮ್ಮ ಮಾಹಿತಿ ನನಗೆ ಬಹಳ ಉಪಯುಕ್ತವಾಗಿದೆ. ಉಪಯೋಗಿಸುವಾಗ ತೊಂದರೆ ಬಂದರೆ ಸಂಪರ್ಕಿಸುವೆ. ಧನ್ಯವಾದಗಳು.

ಪ್ರಸನ್ನ ಶಂಕರಪುರ said...

ಉಪಯೋಗಿಸುವಾಗ ತೊಂದರೆಯಾದರೆ ಖಂಡಿತ ಸಂಪರ್ಕಿಸಿ ಸರ್‍, ಸಹಾಯಕ್ಕೆ ನಾನಿದ್ದೇನೆ.

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

KALADAKANNADI said...

ನನ್ನ೦ಥಹ ಕ೦ಪ್ಯೂಟರ್ ಅಜ್ಞಾನಿಗಳಿಗೆ ನಿಮ್ಮ ಬರಹ ತು೦ಬಾ ಉಪಯುಕ್ತವಾಗಿದೆ. ನುಡಿಯನ್ನು ಯೂನಿಕೋಡ್ ಗೆ ಪರಿವರ್ತಿಸುವ ವಿಧಾನ ಗೊತ್ತಿರಲಿಲ್ಲ. ಒಳ್ಳೆಯ ಉಪಯುಕ್ತ ಮಾಹಿತಿ. ಆದರೂ ನನ್ನ೦ಥಹವರು ನಿಮಗೆ ಆಗಾಗ ತೊ೦ದರೆ ಕೊಡುತ್ತಿರುತ್ತಾರೆ. ಮಾಹಿತಿಗಾಗಿ. ಸಹಕರಿಸಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ಪ್ರಸನ್ನ ಶಂಕರಪುರ said...

ಅದರಲ್ಲಿ ತೊಂದರೆಯೇನು ಬಂತು ಸಾರ್‍, ಬೇರೆಯವರಿಗೆ ಕಲಿಸುವುದೆಂದರೆ ನನಗೂ ಸಂತೋಷದ ಕೆಲಸ. ಏನೇ ಮಾಹಿತಿ ಬೇಕಿದ್ದರೂ ಕೇಳಿ, ನನಗೆ ಗೊತ್ತಿದ್ದರೆ ಖಂಡಿತ ತಿಳಿಸಿಕೊಡುತ್ತೇನೆ.

ಧನ್ಯವಾದಗಳೊಂದಿಗೆ,
-ಪ್ರಸನ್ನ,ಎಸ್,ಪಿ

Harisha - ಹರೀಶ said...

ಉತ್ತಮ ಮಾಹಿತಿ..

vedasudhe said...

ಶ್ರೀ ಪ್ರಸನ್ನ,
ನೀವು ಕವಿ ನಾಗರಾಜ್ ಅವರಿಗೆ ಬರಹ ಕನ್ವರ್ಟ್ ವಿಚಾರದಲ್ಲಿ ನೀಡಿದ ಸಲಹೆಯ ಬಗ್ಗೆ ಅವರಿಂದ ನನಗೆ ತಿಳಿದು ನಿಮ್ಮ ಬ್ಲಾಗ್ ನೋಡಿದೆ. ಖುಷಿಯಾಯ್ತು. ನಿಮ್ಮಿಂದ ತಂತ್ರ ಜ್ಞಾನದ ಬಗೆಗೆ ತಿಳಿಯುವುದು ಸಾಕಷ್ಟಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ಆಸಕ್ತಿ, ವಿಷಯಜ್ಞಾನ ತಿಳಿದು ಬೆರಗಾದೆ.ಸಂಪದದಲ್ಲೊಮ್ಮೆ ಅಯೋಧ್ಯೆಯ ವಿಷಯದಲ್ಲಿ ನೀವು ಪುಟ್ಟ ಲೇಖನಒಂದನ್ನು ಬರೆದಾಗ ನಾನು ಒಂದು ಚಿಕ್ಕ ಸಲಹೆಕೊಟ್ಟಿದ್ದೆ, ನಿಮಗೆ ಹಿಂದಿನ ಚರಿತ್ರೆಯ ಅರಿವಿರದಿದ್ದರೆ ನಿಮ್ಮ ತಂದೆ-ತಾಯಿ ಹತ್ತಿರ ಕೇಳಿ ತಿಳಿದುಕೊಳ್ಳಬಹುದಲ್ಲವೇ? ಎಂದು, ಆ ನಂತರ ನಿಮಗೆ ಬೇಸರವಾಗುವಷ್ಟು ಪ್ರತಿಕ್ರಿಯೆ ಸಂಪದದಲ್ಲಿ ಬಂತೆಂದು ಕವಿನಾಗರಾಜರಿಂದ ತಿಳಿದೆ. ಬೇಸರಿಸದಿರಿ. ಬೆಳೆಯುವಾಗ ಇವೆಲ್ಲಾ ಇದ್ದದ್ದೇ. ಇನ್ನು ನಿಮ್ಮಿಂದ ಕೆಲವು ಸಲಹೆ ಪಡೆಯುವುದಿದೆ. ನಿಮ್ಮ ಬ್ಲಾಗ್ ನಲ್ಲಿ ಮಾಲಿಕೆಗಳನ್ನು ಮೇಲ್ಭಾಗದಲ್ಲಿ ಬರುವಂತೆ ಗ್ಯಾಜೆಟ್ ಅಳವಡಿಸಿದ್ದೀರಲ್ಲಾ! ಅದು ಹೇಗೆ? ಬ್ಲಾಗ್ ಕೌಂಟರ್ ನಲ್ಲಿ ಈಗ ಆನ್ ಲೈನ್ ಇರುವವರು ಮತ್ತು ಇಂದು ಬಂದುಹೋಗಿರುವವರ ಸಂಖ್ಯೆ ಬರುವಂತೆ ಮಾಡಿದ್ದೀರಲ್ಲಾ!ಅದು ಹೇಗೆ?
ವೇದಸುಧೆ ಎಂಬ ಬ್ಲಾಗ್ ಹೊಂದಿರುವ ನಾನು ತಿಳಿಯಬೇಕಾದ್ದು ಬಹಳಷ್ಟಿದೆ. ಆಡಿಯೋ ಎಡಿಟ್ ಮಾಡಿ ಅಪ್ಲೋಡ್ ಮಾಡುವ ನಾನು ಅದೇ ವೀಡಿಯೋ ಅಪ್ಲೋಡ್ ಮಾಡಲು ಬಾರದೆ ಹೇಗಿದೆಯೋ ಹಾಗೆಯೇ ಅಪ್ಲೋಡ್ ಮಾಡುತ್ತೇನೆ. ಒಮ್ಮೆ ನಮ್ಮ ವೇದಸುಧೆ ಬ್ಲಾಗ್ ನೋಡಿ. ವಿದ್ಯಾರ್ಥಿಯಾಗಿರುವ ನಿಮಗೆ ಹೆಚ್ಚು ತೊಂದರೆ ಕೊಡಲು ಮನಸ್ಸಾಗದಿದ್ದರೂ ನೀವು ಒಪ್ಪಿದರೆ ನಮ್ಮ ಬ್ಲಾಗ್ ಬಳಗಕ್ಕೆ ನಿಮ್ಮನ್ನು ತಾಂತ್ರಿಕ ಸಲಹೆಗೆ ಆಮಂತ್ರಿಸುವ ಆಸೆ ಇದೆ[ಉಚಿತ ಸೇವೆಗಾಗಿ]
ವೇದಸುಧೆಯನ್ನೊಮ್ಮೆ ಇಣುಕಿ, ನಿಮ್ಮ ತಾಂತ್ರಿಕ ಸಲಹೆ ಸ್ವೀಕರಿಸಲು ಸಿದ್ಧ.
ಶುಭವಾಗಲಿ
www.vedasudhe.blogspot.com
vedasudhe@gmail.com
-ಶ್ರೀಧರ್

ಪ್ರಸನ್ನ ಶಂಕರಪುರ said...

ಧನ್ಯವಾದಗಳು ಹರೀಶ,

ಪ್ರಸನ್ನ ಶಂಕರಪುರ said...

@ ಹರಿಹರಪುರ ಶ್ರೀಧರ್‍, ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಮೇಲೆ ಬೇರೆಬೇರೆ ವಿಭಾಗಗಳಿವೆಯಲ್ಲಾ(ತಂತ್ರಜ್ಞಾನ, ಕನ್ನಡ ಇತ್ಯಾದಿ), ಅವೆಲ್ಲಾ ಪ್ರತ್ಯೇಕ ಪುಟಗಳು. ಅದನ್ನು ಡ್ಯಾಶ್‌ಬೋರ್ಡ್‌ನಲ್ಲಿ New Post--> Edit Pages--> NEW PAGE ಮೂಲಕ ಸೃಷ್ಟಿಸಬಹುದು.

ಇನ್ನು ಕೌಂಟರ್‍ನಲ್ಲಿ ಈಗ ಇರುವವರು ಹಾಗೂ ಇಂದು ಬಂದಿರುವವರ ಸಂಖ್ಯೆಯನ್ನು http://histats.com ಮೂಲಕ ಅಳವಡಿಸಬಹುದು.

ಬಿಡುವಿದ್ದಾಗ ವೇದಸುಧೆಗೆ ತಾಂತ್ರಿಕ ಸೇವೆಗಳನ್ನು ಮಾಡಬಲ್ಲೆ. kannadaprasanna@gmail.com ಗೆ ಒಂದು ಆಮಂತ್ರಣ ಕಳುಹಿಸಿ.

ವಂದನೆಗಳೊಂದಿಗೆ,
-ಪ್ರಸನ್ನ

ಪ್ರಸನ್ನ ಶಂಕರಪುರ said...

@ಶಿವಶಂಕರ ವಿಷ್ಣು ಯಳವತ್ತಿ, ಧನ್ಯವಾದಗಳು.

-ಪ್ರಸನ್ನ.ಎಸ್.ಪಿ

KAVI SURESH, SHIMOGA said...

ನನ್ನಣ್ಣ ಕವಿ ನಾಗರಾಜ್ ರ ಮೂಲಕ ನಿಮ್ಮ ಬ್ಲಾಗ್ ನೋಡಲನುವಾಯಿತು. ನನಗೂ ಈ ಪ್ರಶ್ನೆ ಬಹಳ ದಿನಗಳಿಂದ ಕಾಡುತ್ತಿತ್ತು. ಒಮ್ಮೆ ಪ್ರಯತ್ನಿಸಿ, ತೊಂದರೆಗಳಿದ್ದಲ್ಲಿ, ನಿಮ್ಮನ್ನು ಸಂಪರ್ಕಿಸುವೆ. ಮಾಹಿತಿಗಾಗಿ ಅನಂತ ಧನ್ಯವಾದಗಳು.
[At your leisure, pl.visit our family blog:
http://keladikavimanetana.blogspot.com and offer your views]

ಪ್ರಸನ್ನ ಶಂಕರಪುರ said...

@KAVI SURESH ಬರಹ ಕನ್ವರ್ಟ್ ತಂತ್ರಾಂಶವನ್ನು ಪ್ರಯತ್ನಿಸಿ ನೋಡಿ, ತೊಂದರೆ ಕಂಡುಬಂದಲ್ಲಿ ತಿಳಿಸಿ. ಬಗೆಹರಿಸಲು ಸಾಧ್ಯವೇ ಎಂದು ನೋಡೋಣ.

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Jivanupayogi sutragalu said...

ಮಾಹಿತಿ ತುಂಬಾ ಇಷ್ಟವಾಯಿತು, ನಾನು ಈಗಷ್ಟೆ ಬ್ಲಾಗ್ ಲೋಕದಲ್ಲಿ ಅಂಬೆಗಾಲಿಡುತ್ತಿದ್ದೇನೆ! ನಿಮ್ಮ ತರಹ.
ಅಂದ ಹಾಗೆ
ಯುನಿಕೋಡ ನಿಂದ ಅನ್ಸಿಯಲ್ಲಿ ಪರಿವರ್ತಿಸಬಹುದಾ?
ಕುಮಾರ

ಪ್ರಸನ್ನ ಶಂಕರಪುರ said...

ಪ್ರತಿಕ್ರಿಯೆಗಾಗಿ ಧನ್ಯವಾದಗಳು,

ಯೂನಿಕೋಡ್‌ನಲ್ಲಿರುವುದನ್ನೂ ANSIಗೆ ಪರಿವರ್ತಿಸಬಹುದು. ಮೇಲಿನ ವಿಧಾನವನ್ನು ಉಲ್ಟಾ ಮಾಡಿದದರಾಯ್ತು ಅಷ್ಟೆ! ಅಂದರೆ ಯೂನಿಕೋಡ್‌ನಲ್ಲಿರುವುದನ್ನು UNICODE ಬಾಕ್ಸ್‌‌ನಲ್ಲಿ ಪೇಸ್ಟ್ ಮಾಡಬೇಕು, ನಂತರ BRHCODE ಕಡೆಗಿರುವ ಬಾಣದ ಚಿಹ್ನೆಯನ್ನು ಒತ್ತಬೇಕು. ಅದಾದ ಮೇಲೆ BRHCODEನಿಂದ ANSI ಕಡೆಗಿರುವ ಬಾಣದ ಗುರುತನ್ನು ಒತ್ತಬೇಕು. ನಂತರ ANSI ಪಕ್ಕದಲ್ಲಿರುವ View ಒತ್ತಿದರೆ ANSIಗೆ ಕನ್ವರ್ಟ್ ಆಗಿರುವ ಪಠ್ಯವು ವರ್ಡ್‌ನಲ್ಲಿ ಓಪನ್ ಆಗುತ್ತದೆ. ನಂತರ ಅದನ್ನು ಸೇವ್ ಮಾಡಿಕೊಳ್ಳಬಹುದು.

-ಪ್ರಸನ್ನ.ಎಸ್.ಪಿ

Post a Comment