Friday, August 13, 2010

ಕೋಮಲ್ ಎಂಬ ಹಾಸ್ಯ ಬರಹಗಾರ

ಹಾಸ್ಯ ಲೇಖನಕ್ಕೆ ಮತ್ತೊಂದು ಹೆಸರು


ಜೀವನದಲ್ಲಿ ದುಃಖಗಳು ಸಾಮಾನ್ಯ. ಅದರ ಚಿಂತೆಯಲ್ಲೇ ನಮ್ಮ ದಿನಗಳನ್ನು ಕಳೆದರೆ ದೇಹ ರೋಗಗಳ ತಾಣವಾಗಿ ಬಿಡುತ್ತದೆ. ಆದಷ್ಟು ನಾವು ನಗುತ್ತಾ, ಮತ್ತೊಬ್ಬರನ್ನೂ ನಗಿಸುತ್ತಾ ಬಾಳಿದರೆ ಅದರ ಮಜಾನೇ ಬೇರೆ. ಅದನ್ನೇ ನಾನು ಮಾಡಲಿಚ್ಚಿಸಿರುವುದು. ಮನದ ನೋವುಗಳನ್ನೆಲ್ಲಾ ಮರೆತು ಯಾವಾಗಲೂ ಹಸನ್ಮಖಿಯಾಗಿರಿ. ಅಂದ ಹಾಗೆ ನೀವು ಕೂಡ ನಿಮ್ಮ ಹಾಸ್ಯ ಲೇಖನಗಳನ್ನು, ಕವನಗಳನ್ನು, ಘಟನಾವಳಿಗಳನ್ನು ಬರೆಯಬಹುದು. ಬರುತ್ತೀರಾ ತಾನೆ. ನಮ್ಮನ್ನೂ ನಗಿಸಿ. ನೂರು ವರ್ಷ ಬಾಳಿ. ಇದೇ ನನ್ನ ಹಾರೈಕೆ.


ಮೇಲಿನ ಮಾತುಗಳು ಎಷ್ಟು ಸತ್ಯ ಅಲ್ಲವೇ? ನಾವು ನಗುನಗುತ್ತಾ ಇದ್ದರೆ ಜೀವನ ಸುಂದವಾಗಿರುತ್ತದೆ. ಆದರೆ ನಮ್ಮ ಇಂದಿನ ಜಂಜಾಟದ ಬದುಕಿನಲ್ಲಿ ನಗಲೂ ನಮಗೆ ಪುರುಸೊತ್ತಿರುವುದಿಲ್ಲ. ಆದರೆ ನಾವು ನಮ್ಮ ಒತ್ತಡಗಳನ್ನೆಲ್ಲಾ ಬದಿಗೊತ್ತಿ ನೋಡಲೇಬೇಕಾದ ತಾಣವೊಂದಿದೆ, ಅದೇ ನಮ್ಮ ನಿಮ್ಮೆಲ್ಲರ "ಕೋಮಲ್" ಅವರ ಹಾಸ್ಯ ಬರಹಗಳ ಬ್ಲಾಗ್. ಅವರ ತಾಣ ಹೊಕ್ಕೊಡನೆ ನಮಗೆ ಕಾಣುವುದು ಮೇಲಿನ ಸಾಲುಗಳು.ಅವರ ತಾಣದಲ್ಲಿ ಮುಂದೆ ಮುಂದೆ ಓದುತ್ತಾ ಹೋದೊಡನೆ ನಮಗೆ ನಕ್ಕೂ ನಕ್ಕೂ ಸಾಕಾಗುತ್ತದೆ. ಹತ್ತಾರು ಹಾಸ್ಯ ಲೇಖನಗಳ ಮೂಲಕ ನಮ್ಮನ್ನು ನಗೆಯಲ್ಲಿ ತೇಲಿಸುತ್ತಾರೆ. ಅವರ ಬರಹಗಳಲ್ಲಿ ಬರುವ ಗಬ್ಬುನಾಥ ಗೌಡಪ್ಪ, ಸುಬ್ಬ, ರಂಗ, ಕಟ್ಟಿಗೆ ಒಡೆಯುವ ಕಿಸ್ನ, ನಿಂಗಿ ಮುಂತಾದವರು ನಿಜವಾಗಿಯೂ ಇದ್ದಾರೇನೋ ಎಂದು ಭಾಸವಾಗುತ್ತದೆ. ಪ್ರಚಲಿತ ಘಟನೆಗಳಿಗೆ ಹಾಸ್ಯ ರೂಪ ಕೊಡುವುದು ಇವರ ವಿಶೇಷ. ಇವರ ಬರಹಗಳಲ್ಲಿ ಫುಟ್‌‌ಬಾಲ್ ವಿಶ್ವಕಪ್, ಕಾಂಗ್ರೆಸ್ ಪಾದಯಾತ್ರೆ, ಬಳ್ಳಾರಿ ಗಣಿಗಾರಿಕೆ, ಸ್ನೇಹಿತರ ದಿನ, ಮೊಬೈಲ್‌‌ ಫೋನ್ ಅವಾಂತರ ಹೀಗೆ ಎಲ್ಲವೂ ಬರುತ್ತದೆ. ಎಲ್ಲ ವಿಷಯಗಳನ್ನೂ ಹಾಸ್ಯಕ್ಕೆ ಒಗ್ಗಿಸಿಕೊಳ್ಳುವ ಕಲೆ ಇವರಿಗೆ ಕರಗತವಾಗಿದೆ. ಜೊತೆಗೆ ಪ್ರತೀ ಬರಹಕ್ಕೂ ಒಂದೊಂದು ಚೆಂದದ ರೇಖಾಚಿತ್ರವನ್ನು ಹಾಕುತ್ತಾರೆ. ಅವರ ಹಾಸ್ಯ ಬರಹಗಳನ್ನು ಓದುತ್ತಾ ಹೋದರೆ ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನೂ ಲೆಕ್ಕಿಸದೇ ನಗತೊಡಗುತ್ತೇವೆ. ಅಂತಹ ತಾಕತ್ತು ಕೋಮಲ್‌‌ರ ಬರಹಗಳಲ್ಲಿದೆ.

ಇನ್ನೇಕೆ ತಡ, ನೀವೂ ಕೋಮಲ್‌‌ರ ಬ್ಲಾಗ್‌ಗೆ ಭೇಟಿ ನೀಡಿ. ಅವರ ಬರಹಗಳನ್ನು ಓದಿ, ಮನಸಾರೆ ನಕ್ಕು ಹಗುರಾಗಿ. ಹಾಗೆಯೇ ಈ ತಾಣದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ, ಅವರನ್ನೂ ನಗಿಸಿ.

ಕೋಮಲ್‌‌ ಅವರ ಬ್ಲಾಗ್ ವಿಳಾಸ : http://komal1231.blogspot.com


ಸಂಪದದಲ್ಲಿ ಕೋಮಲ್‌‌ರ ಬರಹಗಳು: http://sampada.net/user/komal-kumar1231

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

0 Comments:

Post a Comment