Tuesday, June 5, 2012

ಸಂತೆ - ವ್ಯಾಪಾರ

"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .."

(ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತಗಂಡ್ ಹೋದ್ರೆ ಹಲ್ವ ಮಾಡ್ಬೋದು!)

'ಎರಡು ಕೇಜಿ ಕ್ಯಾರೆಟ್ ಕೊಡಪ್ಪ.'

"ತಗೊಳ್ಳಿ ಸಾರ್, ಮತ್ತೇನು ಬೇಕು?"

'ಏನೂ ಬೇಡ. ಸಾಕು'

"ಎಂಭತ್ತು ರೂಪಾಯಿ ಕೊಡಿ."

'ಎಂಭತ್ತು? ಕ್ಯಾರೆಟ್ ಹತ್ತು ರೂಪಾಯಿ ಅಂತಿದ್ದೆ? ಅಲ್ಲಿಗೆ ಇಪ್ಪತ್ತೇ ತಾನೇ ಆಗೋದು?'

"ಕಾಲು ಕೇಜಿಗೆ ಹತ್ತು ರೂಪಾಯಿ!"

'......?!?!?!'

:-)

4 Comments:

G S Srinatha said...

..........ಇನ್ನೊಂದಿಷ್ಟು ದಿನ ಕಳೆದ ಮೇಲೆ ತರಕಾರಿ ಬೆಲೆಯನ್ನು 100 ಗ್ರಾಂಗೆ, 50 ಗ್ರಾಂಗೆ ಲೆಕ್ಕದಲ್ಲಿ ಹೇಳ್ತಾರೆ.

Shrinivas said...

ಚೆನ್ನಾಗಿದೆ.. ಶ್ರೀನಾಥ ಅವರ ಮಾತು ಸತ್ಯ..

ಸುಬ್ರಮಣ್ಯ said...

ಹಾ

Holly A said...

Great reading yourr blog

Post a Comment