Wednesday, September 7, 2011

ಮನುಷ್ಯ V/s. ಸಸ್ಯ

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ? ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಮೊನ್ನೆ ಹಬ್ಬಕ್ಕೆಂದು ಊರಿಗೆ ಹೋದಾಗ ಇದೇ ರೀತಿಯ ಕೆಲವು ಸಸ್ಯಗಳನ್ನು ಗಮನಿಸಿದೆ. ಕೆಳವು ಗೋಡೆಗಳ ಮೇಲೆ ಬೆಳೆದುಕೊಂಡಿದ್ದರೆ, ಇನ್ನು ಕೆಲವು ಹೆಂಚು, ದೋಣಿ (ನೀರು ಹೋಗಲು ಹೆಂಚಿನ ತುದಿಗೆ ಹಾಕಿರುವ ಅರ್ಧಚಂದ್ರಾಕಾರದ ಉದ್ದವಾದ ಪೈಪ್/ ದಬ್ಬೆಯ ತುಂಡು) ಇತ್ಯಾದಿ ಜಾಗಗಳಲ್ಲಿ ಬೆಳೆದುಕೊಂಡಿದ್ದವು. ಅದನ್ನು ನೋಡಿದ ಮೇಲೆ ನಮಗೆ ಬದುಕುವುದಕ್ಕೆ ಸಸ್ಯಗಳಿಗಿಂತ ಕಷ್ಟವೇ ಎಂದು ಕೇಳಿಕೊಳ್ಳುವಂತಾಯಿತು..






-ಚಿತ್ರಗಳು: ಪ್ರಸನ್ನ.ಎಸ್.ಪಿ

1 Comments:

KAVI SURESH, SHIMOGA said...

ಬದುಕಿಗೊಂದು ನಿಶ್ಚಿತ ಗುರಿ; ಗುರಿ ಸಾಧಿಸಲೊಂದು ನಿಶ್ಚಿತ ಸಾಧನಾಮಾರ್ಗ ಇದ್ದವರು ಮಾತ್ರಾ ಈ ಸಸ್ಯಗಳಂತೆ ಬದುಕಬಲ್ಲರು! ಚಿತ್ರಗಳೂ ಚೆನ್ನಾಗಿವೆ.

Post a Comment