Friday, July 22, 2011

ತುಳು ನಾಡಿನಲ್ಲಿ..

ದಕ್ಷಿಣ ಕನ್ನಡ ಜಿಲ್ಲೆಗೆ ಹೋದ್ರೆ ಯಾವ್ದೋ ಬೇರೆ ರಾಜ್ಯಕ್ಕೆ ಹೋದಂತೆ ಅನ್ಸುತ್ತೆ. ಯಾಕಂದ್ರೆ ಅಲ್ಲಿ ಎಲ್ರೂ ತುಳು ಭಾಷೆಯಲ್ಲೇ ಮಾತಾಡ್ತಾರೆ. ನಾವಾಗಿಯೇ ಅವರ ಬಳಿ ಕನ್ನಡದಲ್ಲಿ ಮಾತಾಡಿದರೆ ಮಾತ್ರ ಅವ್ರು ಕನ್ನಡದಲ್ಲಿ ಮಾತಾಡ್ತಾರೆ. ಅದರಲ್ಲೂ ಎಷ್ಟೋ ಜನರಿಗೆ ಕನ್ನಡ ಸರಿಯಾಗಿ ಬರುವುದೇ ಇಲ್ಲ. ನನಗಂತೂ ತುಳು ಸ್ವಲ್ಪವೂ ಬರುವುದಿಲ್ಲ. ಹಾಗಾಗಿ ಅಲ್ಲಿಗೆ ಹೋಗಿದ್ದಾಗ ಭಾಷೆಯ ತೊಡಕಿನಿಂದ ಸ್ವಲ್ಪ ಇರುಸು ಮುರುಸಾಗಿದ್ದು ನಿಜ. ಆದರೆ ಕನ್ನಡದಲ್ಲಿಯೇ ಮಾತನಾಡಿಸಿದ ವ್ಯಕ್ತಿಗಳೂ ಸಿಕ್ಕರು. ಅವರೇ ಸರ್ಕಾರಿ ಬಸ್ಸಿನ ಕಂಡಕ್ಟರ್‌ಗಳು! ಅಲ್ಲಿಂದ ಹೊರಡುವ ದಿನ ಬಸ್ಸಿನಲ್ಲಿ ಒಬ್ಬ ನನ್ನ ಪಕ್ಕವೇ ಬಂದು ಕುಳಿತುಕೊಂಡ. ಆಮೇಲೆ ನನ್ನ ಜೊತೆ ತುಳುವಿನಲ್ಲಿಯೇ ಮಾತಾಡತೊಡಗಿದ. ನನಗೆ ಏನೂ ಅರ್ಥ ಆಗ್ಲಿಲ್ಲ. ಆದ್ರೂ ಎಲ್ಲದಕ್ಕೂ ಹ್ಞೂಂ.. ಹ್ಞೂಂ.. ಅಂದೆ. ಸುಮಾರು ಹೊತ್ತು ಹಾಗೇ ಮಾತಾಡ್ತಿದ್ದ. ನನಗೂ ಬೇಜಾರಾಗಿ ನಿದ್ದೆ ಬರುತ್ತಿರುವಂತೆ ಕಣ್ಣು ಮುಚ್ಚಿಕೊಂಡು ಕುಳಿತೆ. ಆಮೇಲೆ ಅವನು ಎದ್ದುಹೋಗಿ ಪಕ್ಕದ ಸೀಟಿನಲ್ಲಿ ಕುಳಿತಿದ್ದವನ ಹತ್ತಿರ ಮಾತನಾಡೋಕೆ ಶುರು ಮಾಡಿದ. ಸಧ್ಯ ಕೊರೆತ ಕಡಿಮೆಯಾಯ್ತಲ್ಲಾ ಅಂತ ಅಂದುಕೊಂಡು ನಿದ್ದೆ ಮಾಡಿದೆ. :)

1 comment:

  1. please let me know your mobile number please
    yours
    ananthkonambi
    cell: 9448337769

    ReplyDelete