Wednesday, September 7, 2011

ಮನುಷ್ಯ V/s. ಸಸ್ಯ

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ? ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಮೊನ್ನೆ ಹಬ್ಬಕ್ಕೆಂದು ಊರಿಗೆ ಹೋದಾಗ ಇದೇ ರೀತಿಯ ಕೆಲವು ಸಸ್ಯಗಳನ್ನು ಗಮನಿಸಿದೆ. ಕೆಳವು ಗೋಡೆಗಳ ಮೇಲೆ ಬೆಳೆದುಕೊಂಡಿದ್ದರೆ, ಇನ್ನು ಕೆಲವು ಹೆಂಚು, ದೋಣಿ (ನೀರು ಹೋಗಲು ಹೆಂಚಿನ ತುದಿಗೆ ಹಾಕಿರುವ ಅರ್ಧಚಂದ್ರಾಕಾರದ ಉದ್ದವಾದ ಪೈಪ್/ ದಬ್ಬೆಯ ತುಂಡು) ಇತ್ಯಾದಿ ಜಾಗಗಳಲ್ಲಿ ಬೆಳೆದುಕೊಂಡಿದ್ದವು. ಅದನ್ನು ನೋಡಿದ ಮೇಲೆ ನಮಗೆ ಬದುಕುವುದಕ್ಕೆ ಸಸ್ಯಗಳಿಗಿಂತ ಕಷ್ಟವೇ ಎಂದು ಕೇಳಿಕೊಳ್ಳುವಂತಾಯಿತು..






-ಚಿತ್ರಗಳು: ಪ್ರಸನ್ನ.ಎಸ್.ಪಿ

Saturday, September 3, 2011

ಚಾಮರಾಜನಗರ, ಅಧಿಕಾರ ಮತ್ತು ಮೂಢನಂಬಿಕೆ

ಚಾಮರಾಜನಗರಕ್ಕೆ ಬರುವ ರಾಜ್ಯದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ (ಮೂಢ)ನಂಬಿಕೆಯಿದೆ. ಮುಖ್ಯಮಂತ್ರಿಗಳಿರಲಿ, ಮಂತ್ರಿಗಳು ಹಾಗೂ ಅಧಿಕಾರಿಗಳೂ ಸಹ ಅಲ್ಲಿಗೆ ಕಾಲಿಡಲು ಹೆದರುತ್ತಾರೆ. ಈಗ ಅಲ್ಲಿಗೆ ತಗುಲಿರುವ ಶಾಪ(?)ವನ್ನು ಕಳೆಯಲು ಅಷ್ಟಮಂಗಳ ಪ್ರಶ್ನೆ ನಡೆಸಿ, ತೊಂದರೆಗಳನ್ನು ಪರಿಹರಿಸಿ ನಂತರ ಸದಾನಂದಗೌಡರನ್ನು ಚಾಮರಾಜನಗರಕ್ಕೆ ಕರೆಸುವ ಯೋಜನೆಗಳು ನಡೆಯುತ್ತಿದೆ. ಇದರ ಜೊತೆಗೇ ಕೇಳಿ ಬರುತ್ತಿರುವ ಇನ್ನೊಂದು ಸುದ್ದಿಯೆಂದರೆ ಶ್ರೀರಾಮುಲು ಅವರಿಂದ ಹೊಸ ಪಕ್ಷ ರಚನೆ. ಹೌದು, ಸುದ್ದಿಮೂಲಗಳ ಪ್ರಕಾರ ಶ್ರೀರಾಮುಲು ಅವರು ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಬಹುತೇಕ ಖಚಿತ. ಅಲ್ಲದೇ ಸಧ್ಯದಲ್ಲಿಯೇ ಹೊಸ ಪಕ್ಷವನ್ನೂ ಕಟ್ಟಲಿದ್ದಾರಂತೆ. ಅದು ನಿಜವೇ ಆದರೆ ಶ್ರೀರಾಮುಲು ಬೆಂಬಲಿಗ ಶಾಸಕರೂ ಕೂಡ ಬಿಜೆಪಿ ತೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದಲ್ಲಿ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಡಿ.ವಿ.ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.

ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನದೊಂದು ವಿನಂತಿ, ನಿಮ್ಮ ಚಾಮರಾಜನಗರ ಭೇಟಿಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ. ಒಂದು ವೇಳೆ ನೀವು ಚಾಮರಾಜನಗರಕ್ಕೆ ಭೇಟಿ ನೀಡಿದ ಸಮಯದಲ್ಲಿಯೇ ಶ್ರೀರಾಮುಲು ಮತ್ತವರ ಬೆಂಬಲಿಗ ಶಾಸಕರಿಂದ ನಿಮ್ಮ ಸರ್ಕಾರ ಬಹುಮತ ಕಳೆದುಕೊಂಡರೆ ಆಗ ಚಾಮರಾಜನಗರದ ಬಗ್ಗೆ ಇರುವ ಮೂಢನಂಬಿಕೆ ಮತ್ತೊಮ್ಮೆ ನಿಜವಾಗುತ್ತದೆ. ಹಾಗಾಗದಿರಲಿ ಎನ್ನುವುದು ಎಲ್ಲರ ಆಶಯ.

Saturday, August 27, 2011

ಬ್ಲಾಗನ್ನು Export/Import ಮಾಡುವ ವಿಧಾನ

ಬ್ಲಾಗರ್'ನಲ್ಲಿರುವ ನಿಮ್ಮ ಬ್ಲಾಗಿನ ಅಷ್ಟೂ ಹೂರಣವನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಿದೆ. ಹಾಗೆಯೇ ನಿಮ್ಮ ಬ್ಲಾಗಿನ ವಿಷಯಗಳನ್ನು ನಿಮ್ಮ ಕಂಪ್ಯೂಟರಿನಲ್ಲಿ ಉಳಿಸಿಕೊಳ್ಳುವುದರಿಂದ ಮುಂದೆಂದಾದರೂ ನಿಮ್ಮ ಬ್ಲಾಗಿನ ಬರಹಗಳು ಅಳಿಸಿಹೋದರೆ, ಅದನ್ನು ಬಳಸಿಕೊಂಡು ಪುನಃ ಮೊದಲಿನ ರೂಪಕ್ಕೇ ತರಬಹುದು. ಅದಕ್ಕಾಗಿ ಮೊದಲು Dashboard--> Settings-->Basic ಇಲ್ಲಿಗೆ ಹೋಗಿ, Export blog ಮೇಲೆ ಕ್ಲಿಕ್ ಮಾಡಿ.

ನಂತರ Download Blog ಒತ್ತಿ.

ನಂತರ Save File ಆರಿಸಿ OK ಒತ್ತಿ. ಎಲ್ಲಿ ಬೇಕೋ ಅಲ್ಲಿ ಸೇವ್ ಮಾಡಿಕೊಳ್ಳಿ.

ಈಗ ನಿಮ್ಮ ಬ್ಲಾಗಿನ ವಿವರಗಳಿರುವ xml ಫೈಲ್ ಕಂಪ್ಯೂಟರ್ನಲ್ಲಿ ಸೇವ್ ಆಗಿರುತ್ತದೆ.

ಈಗ ಅದನ್ನು ಬೇರೆ ಕಡೆ ಬಳಸುವುದು ಹೇಗೆ ಅಥವಾ restore ಮಾಡುವುದು ಹೇಗೆಂದು ನೋಡೋಣ.
Dashboard--> Settings-->Basic ಇಲ್ಲಿಗೆ ಹೋಗಿ, Import blog ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಬ್ಲಾಗಿನ ವಿವಗಳಿರುವ xml ಫೈಲನ್ನು ಓಪನ್ ಮಾಡಿ.

ಸುರಕ್ಷಾ ಸಂಕೇತವನ್ನು ಸರಿಯಾಗಿ ನಮೂದಿಸಿ, ಹಾಗೂ Automatically publish all imported posts ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಮತ್ತು Import Blog ಒತ್ತಿ.

ನಂತರ ನಿಮ್ಮ ಬ್ಲಾಗನ್ನು ನೋಡಿದರೆ ನೀವು ಮಾಡಿದ ಬದಲಾವಣೆ ಗೋಚರಿಸುತ್ತದೆ.

-ಪ್ರಸನ್ನ.ಎಸ್.ಪಿ

Friday, August 26, 2011

#Kannada

A hash (#) followed by the word is called the hashtag (#tag). Hash tag is commonly used in Twitter to tell people what we are tweeting about. And it is also helpful in tracking all tweets of a particular subject. For example, if you are tweeting about India, add a hashtag "#India" in your tweet. So if anybody clicks on #India, they'll get all tweets with the hashtag India including your tweet.

Now I've created a twitter account called @hashKannada. It retweets all the tweets with the hashtag Kannada (#Kannada) on twitter. It helps to track the tweets in/about Kannada. So if you want to see Kannada tweets or tweets with #Kannada, you can follow @hashKannada on Twitter!

Thank you.

Wednesday, August 24, 2011

ನಗುವುದಕ್ಕೆ ಇನ್ನೊಂದು ಹೊಸ ದಾರಿ.

ಇತ್ತೀಚೆಗೆ ಬೇಸರವಾದರೆ, ಒಂದಿಷ್ಟು ನಗು ತರಿಸಿಕೊಳ್ಳಲು ಹೊಸದೊಂದು ವಿಧಾನ ಕಂಡುಕೊಂಡಿದ್ದೇನೆ. ಅದೇನು ಅಂತ ಕೇಳಿದ್ರಾ? ಮೊನ್ನೆ ಮೊನ್ನೆ ಗೂಗಲ್ ಕಂಪೆನಿ ಭಾಷಾಂತರ ಸೇವೆಗೆ ಚಾಲನೆ ಕೊಡ್ತು ನೆನಪಿದೆಯೇ? ಆ ತಾಣಕ್ಕೆ ಹೋಗುತ್ತೇನೆ. ನಂತರ ಯಾವುದಾದರೂ ಕನ್ನಡ ಪಠ್ಯವನ್ನು ಇಂಗ್ಲೀಷಿಗೆ ಭಾಷಾಂತರ ಮಾಡುವುದಕ್ಕೆ ಹೇಳುತ್ತೇನೆ. ಮುಂದೇನೇಗುತ್ತೆ ಎನ್ನುವುದನ್ನು ನಾನು ಹೇಳುವುದಿಲ್ಲ. ಗೂಗಲ್ ಭಾಷಾಂತರವನ್ನು ನೀವೇ ಒಮ್ಮೆ ಪ್ರಯತ್ನಿಸಿ ನೋಡಿ. (ಗೂಗಲ್ ಭಾಷಾಂತರಕ್ಕೆ ಇಲ್ಲಿ ಕ್ಲಿಕ್ಕಿಸಿ.)

ಸ್ವಲ್ಪ ದಿನದ ಹಿಂದೆ "ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ" ಎನ್ನುವ ಒಂದು ಬರಹ ಬರೆದಿದ್ದೆ. ಅದರ ಇಂಗ್ಲೀಷ್ ಭಾಷಾಂತರದ ಚಿತ್ರವನ್ನು ಕೆಳಗೆ ಲಗತ್ತಿಸಿದ್ದೇನೆ. ಅದನ್ನು ಓದಿ, ಹಾಗೆಯೇ ಪ್ರಸ್ತುತ ಬ್ಲಾಗ್ ಬರಹವನ್ನೇ ಭಾಷಾಂತರಕ್ಕೆ ಕೊಟ್ಟು ನೋಡಿ. ಗೂಗಲ್ ಹೇಗೆ ಭಾಷಾಂತರ ಮಾಡುತ್ತೆ ಅಂತ ಗೊತ್ತಾಗುತ್ತದೆ.. :-)