Friday, August 12, 2011

php ಔಟ್ ಡೇಟೆಡ್ಡು!!



"ಹ್ಹೆ .. ಹ್ಹೆ .. ಬನ್ನಿ,, ಕೂತ್ಕೊಳ್ಳಿ. ಏನಾಗ್ಬೇಕಾಗಿತ್ತು?”

'Unix ಕ್ಲಾಸಿಗೆ ಸೇರ್ಬೇಕಿತ್ತು, ಫೀ ಎಷ್ಟಾಗುತ್ತೆ ಅಂತ ವಿಚಾರಿಸೋಕೆ ಬಂದೆ.'

"ಹ್ಹೆ.. ಹ್ಹೆ.. ನಮ್ಹತ್ರ ಈಗ ಯೂನಿಕ್ಸ್ ಸಿಸ್ಟಮ್ ಇಲ್ಲ. ಇನ್ನೊಂದು ಸ್ವಲ್ಪ ದಿನದಲ್ಲಿ ಬರುತ್ತೆ. ಅಲ್ಲೀ ತನ್ಕ ವಿಂಡೋಸ್ ಕ್ಲಾಸಿಗೆ ಸೇರ್ಕೊಳ್ಳಿ"

'ಬೇಡ ಅದೇನೂ ನನಗೆ ಉಪಯೋಗಕ್ಕೆ ಬರೋಲ್ಲ.'

"ಯಾಕೆ ಸಾರ್?  ವಿಂಡೋಸ್ ಕಲೀದೆ, ಕಂಪ್ಯೂಟರ್ ಉಪಯೋಗ್ಸಕ್ಕೆ ಆಗಲ್ಲ. ನಮ್ಹತ್ರ ಸೇರಿದ್ರೆ ಒಂದು ತಿಂಗ್ಳಲ್ಲಿ ವಿಂಡೋಸ್ ಎಕ್ಸ್ಪರ್ಟ್ ಆಗ್ತೀರ.”

'ಬೇಡ, ಬೇರೆ ಯಾವ ಯಾವ ಕೋರ್ಸ್ ಇದೆ?'

"ಟ್ಯಾಲಿಗೆ ಸೇರ್ಕೊಳ್ಳಿ,, ಅದಕ್ಕೆ ಒಳ್ಳೇ ಸ್ಕೋಪ್ ಇದೆ. ಹಂಡ್ರೆಡ್ ಪರ್ಸೆಂಟ್ ಪ್ಲೇಸ್ಮೆಂಟ್ ಗ್ಯಾರೆಂಟಿ."

'ಇಲ್ಲ, ಅದು ನನ್ನ ಕ್ಷೇತ್ರವೇ ಅಲ್ಲ. ಬೇರೆ ಯಾವ್ದಾದ್ರೂ ಉಪಯೋಗಕ್ಕೆ ಬರುವಂತಹ ಕೋರ್ಸ್ ಇದ್ರೆ ಹೇಳಿ. Java ಹೇಳ್ಕೊಡ್ತೀರಾ?'

"ಜಾವಾ ಯಾಕೆ ಸಾರ್? Visual Basicಗೆ ಸೇರಿಕೊಳ್ಳಿ, ತುಂಬಾ ಈಸಿಯಾಗಿ ಕಲೀಬೋದು.”

'Visual Basic ಬೇಡ, ಹೋಗ್ಲಿ phpನಾದ್ರೂ ಹೇಳಿಕೊಡ್ತೀರಾ?'

"php ಎಲ್ಲಾ outdated ಸಾರ್! MS FrontPage ಕಲೀರಿ, ಈಗ ಎಲ್ರೂ ಅದನ್ನೇ ಉಪಯೋಗಿಸೋದು.”

’(outdated ಯಾರು ಅಂತ ಗೊತ್ತಾಯ್ತು ಬಿಡಿ!)’

'ಸರಿ, ಇದರಲ್ಲಿ ನನಗೆ ಬೇಕಾದ ಕೋರ್ಸ್ ಯಾವ್ದೂ ಇಲ್ಲ. ಇನ್ನೊಂದ್ಸಲ ಬರ್ತೀನಿ'

"ಯಾವ್ದಾದ್ರೂ ಕೋರ್ಸಿಗೆ ಸೇರ್ಕೊಳ್ಳಿ ಸಾರ್, ಬೇಕಿದ್ರೆ ಫೀಸ್ ಸ್ವಲ್ಪ ಕಡ್ಮೆ ಮಾಡೋಣ. ಈ ಎಲ್ಲಾ ಕೋರ್ಸಿಗೆ ಭಾರೀ ಸ್ಕೋಪ್ ಇದೆ."

'ಧನ್ಯವಾದ, ಇನ್ನೊಮ್ಮೆ ಬರುತ್ತೇನೆ’..

:-)

1 comment:

  1. yaro thirthahalli ya Mice Computer navaru halidra

    ReplyDelete